ಏಕಾಂತ
ನಾ ಬಯಸಿ ಕುಳಿತಿಹೆ
ಏಕಾಂತವ
ನನ್ನೊಳಗೂ ಹುಟ್ಟಬಹುದು
ಕವಿತೆಯಂದು.
ನಾ ಹೀಗೆ ಕುಳಿತಾಗಲೆಲ್ಲಾ
ಬಂದು ನಿಲ್ಲುವೆ
ಬೆನ್ನಹಿಂದೆ
ಸದ್ದುಮಾಡದೆ.
ಇನ್ನೇನು ನನ್ನ ಲೇಖನಿ
ಸೋಕಲು ಕಾಗದವ
ತೋಳ ಬಳಸುವೆ
ಹೇ…. ಕಾಂತನೆಂದು.
ಗಮನವ ಮಡಚಿಟ್ಟು
ನಿನ್ನ ದುಪ್ಪಟ್ಟದಲ್ಲಿ,
ಲಲ್ಲೆಗರೆಯುವೆ
ಚುಂಬನೋಗ್ಗರಣೆಯೊಂದಿಗೆ.
ಮುಗಿಯಿತಲ್ಲಿಗೆ ಏಕಾಂತ
ಸುಖಾಂತದೊಂದಿಗೆ!
No comments:
Post a Comment