AbhiVyakthi
ನಾನೇನೂ ಬುದ್ಧನಲ್ಲದಿದ್ದರೂ, ನನ್ನೆದೆಯ ದನಿಗೆ ಬದ್ಧ
ನನ್ನ ನಿರೀಕ್ಷೆಯಲ್ಲಿ
Tuesday, September 2, 2014
ದೂ(ದು)ರಾಲೋಚನೆ
ದೂರವಿರುವ
ಪ್ರೇಯಸಿಗಾಗಿ
ಆಲೋಚಿಸುವುದೇ
ದೂರಾಲೋಚನೆ.
ಅವಳು ಹತ್ತಿರ
ಬಂದಾಗ ಮೂಡುವವೇ
ದುರಾಲೋಚನೆ!
ಅಪಾರ್ಥ
ಪದವೊಂದಕ್ಕೆ
ಅಪಾರ ಅರ್ಥ
ಕಲ್ಪಿಸಿಕೊಳ್ಳುವುದೇ
ಅಪಾರ್ಥ!
ಕಣ್-ಭಾಷೆ
ಅವಳ ಕಣ್ಣ
ಭಾಷೆಯನೋದಲು
ಪರಿತಪಿಸಿಹೆ
ಒಡೆದ ಕನ್ನಡಕದ
ಗಾಜು ಹಿಡಿದು
ಪತ್ರವನೋದುವ
ಮುದುಕನಂತೆ
ಹಪಹಪಿಸಿಹೆ!
ಹೃದಯ ಭಾರ
ನಿನ್ನಂತೆಯೇ
ನಿನ್ನ
ನಡೆ
-
ನುಡಿಗಳು
ಕೂಡ
ಬಲು
ತೂಕ
.
ನೋಯದಿರಲಿ
.....
ನಿನ್ನ
ಮನ
ನನ್ನ
ಮಾತುಗಳಿಂದ
,
ಅವೂ
ಕೂಡ
ನನ್ನಂತೆಯೇ
ಬಲು
ಹಗುರ
.
ನಿನ್ನ
ಹೃದಯವ
ನನ್ನಲಿಡು
,
ಆಗಲಾದರೂ
ಆದೇನು
ತೂಕದ
ವ್ಯಕ್ತಿ
!
ಕನಸು-ನನಸು
ನಾನಿರುವ ಮನಸುಗಳು
ಯಾವಾಗಲೂ ಚೆನ್ನಾಗಿರಲಿ,
ನಾನಿರುವ ಕನಸುಗಳು
ನನಸಾಗಲಿ!
ನಿ(ನೀ)ವೇದನೆ
ಹುಡುಗಿಯರು
ಎಲ್ಲರೆದುರು
ಹೇಳುವುದು
ಕಡಿಮೆ
ಗೆಳೆಯನ
ಕಿವಿಯಲಿ
ಹೇಳುವುದೇ
ಜಾಸ್ತಿ
.
ಅದು
ಕಾರಣ
ಸಹಜ
ಸಂಕೋಚವೋ
ಲೋಕದ
ಕಣ್ಣಿಗೆ
ಮಣ್ಣೆರೆಚಲೋ
.
ಆ
ನಿವೇದನೆ
ಅವನ
ಕಿವಿಯಲ್ಲೇ
ಉಳಿಯುವುದು
ಜಾಸ್ತಿ
ಬರಿ
ವೇದನೆಯಾಗುತ್ತಾ
ಸದ್ದಿಲ್ಲದ
(s)
ಶಬ್ಧ
ಗಾಳಿ ಸುದ್ಧಿಯಾಗುವುದು.
ಏಕಾಂತ
ನಾ
ಬಯಸಿ
ಕುಳಿತಿಹೆ
ಏಕಾಂತವ
ನನ್ನೊಳಗೂ
ಹುಟ್ಟಬಹುದು
ಕವಿತೆಯಂದು
.
ನಾ
ಹೀಗೆ
ಕುಳಿತಾಗಲೆಲ್ಲಾ
ಬಂದು
ನಿಲ್ಲುವೆ
ಬೆನ್ನಹಿಂದೆ
ಸದ್ದುಮಾಡದೆ
.
ಇನ್ನೇನು
ನನ್ನ
ಲೇಖನಿ
ಸೋಕಲು
ಕಾಗದವ
ತೋಳ
ಬಳಸುವೆ
ಹೇ
….
ಕಾಂತನೆಂದು
.
ಗಮನವ
ಮಡಚಿಟ್ಟು
ನಿನ್ನ
ದುಪ್ಪಟ್ಟದಲ್ಲಿ
,
ಲಲ್ಲೆಗರೆಯುವೆ
ಚುಂಬನೋಗ್ಗರಣೆಯೊಂದಿಗೆ
.
ಮುಗಿಯಿತಲ್ಲಿಗೆ
ಏಕಾಂತ
ಸುಖಾಂತದೊಂದಿಗೆ!
ಪರಿಣಾಮ
ಇಮ್ಮನ
ಒಮ್ಮನವಾದರೆ
ಪ್ರೀತಿಯ
ನಿರ್ಮಾಣ,
ಒಡೆದ
ಮನ
(
ನೆ
)
ವಾದರೆ
ಪ್ರೀತಿಯ
ನಿರ್ಣಾಮ,
ಪ್ರೀತಿ
ತ್ಯಾಗವಾದಡೆ
ಪ್ರೀತಿಯ
ನಿರ್ವಾಣ
.
ಇದೇ
ಕಾಣಿರೋ
-
ಪ್ರೀತಿಯ
ಪರಿಣಾಮ
!
ನಿಲುವು
ಹೇ
ದೇವಾ
ಕನ್ಯೆಯ
ಸ್ನೇಹದಂತೆ
ನಿನ್ನ
ನಿಲುವು
ಕೊಡುವುದೋ
ಬಿಡುವುದೋ
ಎಂದು
ಯೋಚಿಸುವೆ
ಹಲವು
ಬಾರಿ
!
Newer Posts
Older Posts
Home
Subscribe to:
Comments (Atom)