ನನ್ನ ನಿರೀಕ್ಷೆಯಲ್ಲಿ

Tuesday, September 2, 2014

ದೂ(ದು)ರಾಲೋಚನೆ

ದೂರವಿರುವ
ಪ್ರೇಯಸಿಗಾಗಿ
ಆಲೋಚಿಸುವುದೇ
ದೂರಾಲೋಚನೆ.
ಅವಳು ಹತ್ತಿರ
ಬಂದಾಗ ಮೂಡುವವೇ
ದುರಾಲೋಚನೆ!

ಅಪಾರ್ಥ


ಪದವೊಂದಕ್ಕೆ

ಅಪಾರ ಅರ್ಥ

ಕಲ್ಪಿಸಿಕೊಳ್ಳುವುದೇ

ಅಪಾರ್ಥ!

ಕಣ್-ಭಾಷೆ

ಅವಳ ಕಣ್ಣ
ಭಾಷೆಯನೋದಲು
ಪರಿತಪಿಸಿಹೆ
ಒಡೆದ ಕನ್ನಡಕದ
ಗಾಜು ಹಿಡಿದು
ಪತ್ರವನೋದುವ
ಮುದುಕನಂತೆ
ಹಪಹಪಿಸಿಹೆ!

ಹೃದಯ ಭಾರ

ನಿನ್ನಂತೆಯೇ 
ನಿನ್ನ
 ನಡೆ-ನುಡಿಗಳು 
ಕೂಡ
 ಬಲು ತೂಕ. 
ನೋಯದಿರಲಿ
..... ನಿನ್ನ ಮನ
ನನ್ನ ಮಾತುಗಳಿಂದ, ಅವೂ

ಕೂಡ ನನ್ನಂತೆಯೇ
 
ಬಲು ಹಗುರ.

ನಿನ್ನ ಹೃದಯವ
 
ನನ್ನಲಿಡು, ಆಗಲಾದರೂ

ಆದೇನು ತೂಕದ ವ್ಯಕ್ತಿ!

ಕನಸು-ನನಸು

ನಾನಿರುವ ಮನಸುಗಳು

ಯಾವಾಗಲೂ ಚೆನ್ನಾಗಿರಲಿ,

ನಾನಿರುವ ಕನಸುಗಳು

ನನಸಾಗಲಿ!

ನಿ(ನೀ)ವೇದನೆ

ಹುಡುಗಿಯರು ಎಲ್ಲರೆದುರು
ಹೇಳುವುದು ಕಡಿಮೆ
ಗೆಳೆಯನ ಕಿವಿಯಲಿ
ಹೇಳುವುದೇ ಜಾಸ್ತಿ.
ಅದು ಕಾರಣ
ಸಹಜ ಸಂಕೋಚವೋ
ಲೋಕದ ಕಣ್ಣಿಗೆ
ಮಣ್ಣೆರೆಚಲೋ.
ನಿವೇದನೆ
ಅವನ ಕಿವಿಯಲ್ಲೇ
ಉಳಿಯುವುದು ಜಾಸ್ತಿ
ಬರಿ ವೇದನೆಯಾಗುತ್ತಾ
ಸದ್ದಿಲ್ಲದ(s)ಶಬ್ಧ
ಗಾಳಿ ಸುದ್ಧಿಯಾಗುವುದು.


ಏಕಾಂತ

ನಾ ಬಯಸಿ ಕುಳಿತಿಹೆ
ಏಕಾಂತವ
ನನ್ನೊಳಗೂ ಹುಟ್ಟಬಹುದು
ಕವಿತೆಯಂದು.
ನಾ ಹೀಗೆ ಕುಳಿತಾಗಲೆಲ್ಲಾ
ಬಂದು ನಿಲ್ಲುವೆ
ಬೆನ್ನಹಿಂದೆ
ಸದ್ದುಮಾಡದೆ.
ಇನ್ನೇನು ನನ್ನ ಲೇಖನಿ
ಸೋಕಲು ಕಾಗದವ
ತೋಳ ಬಳಸುವೆ
ಹೇ…. ಕಾಂತನೆಂದು.
ಗಮನವ ಮಡಚಿಟ್ಟು
ನಿನ್ನ ದುಪ್ಪಟ್ಟದಲ್ಲಿ,
ಲಲ್ಲೆಗರೆಯುವೆ
ಚುಂಬನೋಗ್ಗರಣೆಯೊಂದಿಗೆ.
ಮುಗಿಯಿತಲ್ಲಿಗೆ ಏಕಾಂತ

ಸುಖಾಂತದೊಂದಿಗೆ!

ಪರಿಣಾಮ

ಇಮ್ಮನ ಒಮ್ಮನವಾದರೆ
ಪ್ರೀತಿಯ ನಿರ್ಮಾಣ,
ಒಡೆದ ಮನ(ನೆ)ವಾದರೆ
ಪ್ರೀತಿಯ ನಿರ್ಣಾಮ,
ಪ್ರೀತಿ ತ್ಯಾಗವಾದಡೆ
ಪ್ರೀತಿಯ ನಿರ್ವಾಣ.
ಇದೇ ಕಾಣಿರೋ-ಪ್ರೀತಿಯ
ಪರಿಣಾಮ!

ನಿಲುವು

ಹೇ ದೇವಾ 
ಕನ್ಯೆಯ ಸ್ನೇಹದಂತೆ 
ನಿನ್ನ ನಿಲುವು 
ಕೊಡುವುದೋ ಬಿಡುವುದೋ 
ಎಂದು ಯೋಚಿಸುವೆ 
ಹಲವು ಬಾರಿ!

Friday, February 14, 2014

ಪ್ರೇಮವೇ ಲೇಸು


ಅಶನವ ತೊರೆವೆನು 
ವ್ಯಸನಗಳ ಮರೆವೆನು 
ಉಸಿರ ಹಿಡಿವೆನು   

ಮಹಾದೇವಿಯಕ್ಕನಂತೆ
ನಾನೆನ್ನ ಆತ್ಮಸಂಗಾತಿಗೆ  

ಪ್ರೇಮ  ಬದುಕಿಸಬಲ್ಲಡೆ 
ಪ್ರೇಮವೇ ಲೇಸು!

Friday, January 17, 2014

Yellow-ಎಲ್ಲೋ

ಅವಳು 
yellow ಬಣ್ಣದ 
ಉಡುಪು ಧರಿಸಿ 
ಬಂದಾಗ ಎದುರು 
ನನ್ನ ಗಮನ ಎಲ್ಲೋ!

ಮಧುರ ಹನಿ


ಬಿಸಿನೀರ ಹಬೆಯಲಿ 
ಸ್ನಾನದಿ ಬೆವರಿ 
ಜಾರಿತು ಕಾಣದಂತೆ 
ಬೆವರ ಹನಿ 

ಮೂಡಿತು ಹಣೆಯಲಿ 
ಪ್ರೇಮದಿ ಮಿಂದು 
ಹೊಸ ಭರವಸೆಯ 
ಮಧುರ ಹನಿ!