AbhiVyakthi
ನಾನೇನೂ ಬುದ್ಧನಲ್ಲದಿದ್ದರೂ, ನನ್ನೆದೆಯ ದನಿಗೆ ಬದ್ಧ
ನನ್ನ ನಿರೀಕ್ಷೆಯಲ್ಲಿ
Thursday, August 18, 2011
ನಮ್ಮ ಮಾತು
ನಾನು ಮೂಗ
ಅವಳು ಕಿವುಡಿ
ಕಣ್ಣಲ್ಲೇ ನಮ್ಮ ಮಾತು.....!
Monday, August 15, 2011
ಹಬ್ಬದ ಸಡಗರ
ಉಟ್ಟು ಸೀರೆಯ ಹಬ್ಬದಿ
ಚಿಮ್ಮುತ ನಿರಿಗೆಯ ಕಾಲಲಿ
ಬಂದಳು ನೀರೆ
ತಿರುವುತಾ ಮೋರೆ
ಮುಡಿದು ಮಲ್ಲಿಗೆ
ಹಿಡಿದು ಹೋಳಿಗೆ....!
Saturday, July 23, 2011
ಮದುವೆ
ಮಧುರ
ದುರಂತ
ವೇದನೆ
.
.
.
ಅದುವೇ
ಮದುವೆ......!
Sunday, June 19, 2011
ಕತ್ತಲು
ಕತ್ತು ಹಿಸುಕುವ
ಕತ್ತಲು
ದುರ್ಬಲ ಮನಸಿನ
ಸುತ್ತಲು
ಭಯವು ಬುದ್ಧಿಯ
ಮುತ್ತಲು...!
Saturday, April 30, 2011
'ಸಂ'ಶೋಧನೆ
ತೂಕವಿಲ್ಲದ ರೀಸರ್ಚ್ ಪೇಪರ್ ಗಳು,
ಕುಲಗೆಟ್ಟ ರೀಸರ್ಚೆರ್ಸ್ ಗಳು,
ಬೇರೆ ರಿಸರ್ಚ್ ಪೇಪರ್ ಗಳ
ಹುಡುಕುವ ಕಳ್ಳ ಕಣ್ಣುಗಳು...
ಅಲ್ಲಿಂದ ಸ್ವಲ್ಪ-ಇಲ್ಲಿಂದ ಸ್ವಲ್ಪ
ಕದ್ದು ಜೋಡಿಸಿ
ಹೊಸ ರೂಪ
ಕೊಡುವ ಕಲೆಗಾರರು ಇವರು
ಯಾರದೋ ಮಗುವಿಗೆ ತಂದೆಯಾದಂತೆ
ಯಾರದೋ ಸಂ'ಶೋಧನೆಗೆ ಇವರು ಜನಕರು...!
KAVI-‘THE’-SIS
(
KAVI
(
THE
)
SIS
)
ಕವಿತೆ ಎಂದರೆ
ಕಟ್-ಕಾಪಿ-ಪೇಸ್ಟ್
ಮಾಡಿದ ಥೀಸಿಸ್ಸೋ
ಅಥವಾ ರಿಪೋರ್ಟೋ ಅಲ್ಲ.
ಅನುಭವ-ವಾಸ್ತವಗಳ ಹೂರಣದುಂಬಿ,
ಕನಸು-ಕಲ್ಪನೆಗಳ ಕಣಕಕ್ಕೆ.
ಪ್ರೀತಿ-ಸ್ನೇಹದಿ ಲಟ್ಟಿಸಿ
ಒಲವಿನ ಒರತೆಯಲಿ
ಹದವಾಗಿ ಬೇಯಿಸಿದ ಹೋಳಿಗೆಯದು!
Thursday, April 28, 2011
ತಂತಿ ಹರಿದ ವೀಣೆ
ಅವಳು ವೀಣಾ
ನಾನೇ ವೈಣಿಕ
ಅವಳ ಧ್ವನಿ
ತಂತಿ ಹರಿದ ವೀಣೆ..!
ಕನ್ನಡ-ಕನ್ನಡಿ
ಕನ್ನಡ ನಮ್ಮ
ಬದುಕಿನ ಕನ್ನಡಿ
ಇಂಗ್ಲೀಷ್ ಬಿಸಿಲಿಗೆ
ಧರಿಸುವ ಬಣ್ಣದ
ಕೂಲಿಂಗ್ ಗ್ಲಾಸ್....!
ಅವಳೊಂದು ದೊಡ್ದಮರ
ಅಮ್ಮ ಹೇಳುತ್ತಿದ್ದಳು
ನಾ ಚಿಕ್ಕವನಾಗಿದ್ದಾಗ
ಮರಕ್ಕಿಂತ ಮರ
ದೊಡ್ಡದು ಎಂದು….
ನಾನಾಗ ಚಿಕ್ಕವ
ನನಗಾಗ ತಿಳಿದಿರಲಿಲ್ಲ
ಅವಳ ಮಾತಿನ ಅರ್ಥ….
ನನಗೀಗ ತಿಳಿಯುತ್ತಿದೆ
ಅವಳ ಮಾತಿನ ಬೃಹದರ್ಥ
ಅವಳ ಕಷ್ಟದ ಮುಂದೆ
ನಾನೊಂದು ಸಣ್ಣಗಿಡ
ಅವಳೊಂದು ದೊಡ್ದಮರ…!
Monday, April 25, 2011
ಬವಣೆ
ನನ್ನಯ ಮನದಲಿ
ನಿನಗಿದೆ ಮನ್ನಣೆ
ನೀನಿಲ್ಲದೆ ನನಗೆ
ಬರಿಯ ಬವಣೆ...!
Saturday, April 23, 2011
ಬೆಳದಿಂಗಳ ರಾತ್ರಿ
ಬೆಳದಿಂಗಳ ರಾತ್ರಿಯಲಿ
ಕಡಲ ತಡಿಯಲಿ
ನಾವೀರ್ವರೆ ಕುಳಿತಿರಲು
ಮರಳ ಸಕ್ಕರೆಯ ಮೇಲೆ
ಬೀದಿಗೆ ಚಂದ್ರಮನು ಚೆಂಡಿನಂತೆ
ಅಲೆಯ ಮೇಲೆ ತೇಲಿಬರಲು
ನಾವಿಬ್ಬರು ನೀರಲಿ ತೊಯ್ದು
ಚೆಂಡ ಹಿಡಿವ ಮಕ್ಕಳಂತೆ
ಯಾರೋ ಮೆಲುದನಿಯಲಿ ಉಸಿರಿದಂತೆ
ತಂಗಾಳಿಯು ತೇಲಿಬರಲು
ಹೃದಯ ಮಾಡಿತು ಕೊಳಲದನಿ
ನೀ ನನ್ನೆದೆಯ ಒರಗಿದಾಗ...!
Friday, April 22, 2011
ಮುಂಗಾರು ಮಳೆ
ಈ ಮಳೆ.....
ಮಕ್ಕಳಿಗೆ
ತುಂತುರು ಮಳೆ
ಮುದುಕರಿಗೆ
ಮುದುಡುವ ವೇಳೆ
ಪ್ರೇಮಿಗಳಿಗೆ
ಮುಂಗಾರು ಮಳೆ
ವಿರಹಿಗಳಿಗೆ
ಮುಳ್ಳಿನ ಮೆಳೆ...!
ಜೀವನ ಪಯಣ
ಅವಳು
ಅವಳ ಹಿಂದೆ ನಾನು,
ಇವಳು
ನನ್ನ ಹಿಂದೆ ಬೇರೊಬ್ಬಳು,
ನಮ್ಮ ಜೀವನ ಪಯಣ
ಬೇರೆ ಬೇರೆ ದೋಣಿಯಲ್ಲಿ....!
ಅದೃಷ್ಟ ರೇಖೆ
ಅಂಗೈಯ ಹಿಡಿದು
ಕೈ ರೇಖೆಗಳ ಸವರುತ್ತಾ
ರೇಖೆಯೊಂದ ತೋರಿಸಿ,
ನಾನೇ ಆ ಅದೃಷ್ಟ ರೇಖೆ ಎಂದಳು...!
Newer Posts
Home
Subscribe to:
Comments (Atom)