ನನ್ನ ನಿರೀಕ್ಷೆಯಲ್ಲಿ

Friday, February 14, 2014

ಪ್ರೇಮವೇ ಲೇಸು


ಅಶನವ ತೊರೆವೆನು 
ವ್ಯಸನಗಳ ಮರೆವೆನು 
ಉಸಿರ ಹಿಡಿವೆನು   

ಮಹಾದೇವಿಯಕ್ಕನಂತೆ
ನಾನೆನ್ನ ಆತ್ಮಸಂಗಾತಿಗೆ  

ಪ್ರೇಮ  ಬದುಕಿಸಬಲ್ಲಡೆ 
ಪ್ರೇಮವೇ ಲೇಸು!

Friday, January 17, 2014

Yellow-ಎಲ್ಲೋ

ಅವಳು 
yellow ಬಣ್ಣದ 
ಉಡುಪು ಧರಿಸಿ 
ಬಂದಾಗ ಎದುರು 
ನನ್ನ ಗಮನ ಎಲ್ಲೋ!

ಮಧುರ ಹನಿ


ಬಿಸಿನೀರ ಹಬೆಯಲಿ 
ಸ್ನಾನದಿ ಬೆವರಿ 
ಜಾರಿತು ಕಾಣದಂತೆ 
ಬೆವರ ಹನಿ 

ಮೂಡಿತು ಹಣೆಯಲಿ 
ಪ್ರೇಮದಿ ಮಿಂದು 
ಹೊಸ ಭರವಸೆಯ 
ಮಧುರ ಹನಿ!

Friday, August 30, 2013

ಮುಗುಳು ನಗೆ

ನಿನ್ನ ಒಂದು 
ಮುಗುಳು ನಗೆ 
ಎನಗೆ ಮುಳುವಾಗಿದೆ

ನಾನೇನೂ ಕರೆದಿರಲ್ಲಿಲ್ಲ 
ನೀನಾಗೇ ಬಂದೆ, 
ಕಣ್ಣಲ್ಲೇ ಮಾತನಾಡಿದೆ 
ಮುಗುಳ್ನಗುತ್ತಾ 

ನಾ ಹರಿಯದಾದೆ 
ನಿನ್ನ ಕಣ್ಣ-ಭಾಷೆಯ,   
ಓದಲಾರದ ಹಳೆಯ 
ಶಾಸನದಂತೆ 

ಈಗ ನೀನಾಗೇ 
ಹೋಗುತ್ತಿರುವೆ 
ಕೋಪಿಸಿಕೊಂಡು, ನಾ 
ಕೇಳುವುದಿಲ್ಲ ಯಾಕೆಂದು 

ಆದರೆ, ನಿನ್ನ 
ಒಂದು ಮುಗುಳು 
ನಗೆ ಎನಗೀಗ 
ಮುಳುವಾಗಿದೆ!

Thursday, August 18, 2011

ನಮ್ಮ ಮಾತು

ನಾನು ಮೂಗ

ಅವಳು ಕಿವುಡಿ

ಕಣ್ಣಲ್ಲೇ ನಮ್ಮ ಮಾತು.....!

Monday, August 15, 2011

ಹಬ್ಬದ ಸಡಗರ

ಉಟ್ಟು ಸೀರೆಯ ಹಬ್ಬದಿ
ಚಿಮ್ಮುತ ನಿರಿಗೆಯ ಕಾಲಲಿ

ಬಂದಳು ನೀರೆ
ತಿರುವುತಾ ಮೋರೆ

ಮುಡಿದು ಮಲ್ಲಿಗೆ
ಹಿಡಿದು ಹೋಳಿಗೆ....!