ನನ್ನ ನಿರೀಕ್ಷೆಯಲ್ಲಿ

Thursday, August 18, 2011

ನಮ್ಮ ಮಾತು

ನಾನು ಮೂಗ

ಅವಳು ಕಿವುಡಿ

ಕಣ್ಣಲ್ಲೇ ನಮ್ಮ ಮಾತು.....!

Monday, August 15, 2011

ಹಬ್ಬದ ಸಡಗರ

ಉಟ್ಟು ಸೀರೆಯ ಹಬ್ಬದಿ
ಚಿಮ್ಮುತ ನಿರಿಗೆಯ ಕಾಲಲಿ

ಬಂದಳು ನೀರೆ
ತಿರುವುತಾ ಮೋರೆ

ಮುಡಿದು ಮಲ್ಲಿಗೆ
ಹಿಡಿದು ಹೋಳಿಗೆ....!

 

Saturday, July 23, 2011

ಮದುವೆ

 ಮಧುರ 
ದುರಂತ 
ವೇದನೆ 
.
.
.
ಅದುವೇ 
ಮದುವೆ......!

Sunday, June 19, 2011

ಕತ್ತಲು

ಕತ್ತು ಹಿಸುಕುವ
ಕತ್ತಲು
ದುರ್ಬಲ ಮನಸಿನ
ಸುತ್ತಲು
ಭಯವು ಬುದ್ಧಿಯ
ಮುತ್ತಲು...!

Saturday, April 30, 2011

'ಸಂ'ಶೋಧನೆ

ತೂಕವಿಲ್ಲದ ರೀಸರ್ಚ್ ಪೇಪರ್ ಗಳು,
ಕುಲಗೆಟ್ಟ ರೀಸರ್ಚೆರ್ಸ್ ಗಳು,
ಬೇರೆ ರಿಸರ್ಚ್ ಪೇಪರ್ ಗಳ
ಹುಡುಕುವ ಕಳ್ಳ ಕಣ್ಣುಗಳು...

ಅಲ್ಲಿಂದ ಸ್ವಲ್ಪ-ಇಲ್ಲಿಂದ ಸ್ವಲ್ಪ
ಕದ್ದು  ಜೋಡಿಸಿ
ಹೊಸ  ರೂಪ
ಕೊಡುವ  ಕಲೆಗಾರರು ಇವರು
ಯಾರದೋ ಮಗುವಿಗೆ ತಂದೆಯಾದಂತೆ 
ಯಾರದೋ  ಸಂ'ಶೋಧನೆಗೆ  ಇವರು  ಜನಕರು...!


KAVI-‘THE’-SIS

(KAVI(THE)SIS)

ಕವಿತೆ ಎಂದರೆ
ಕಟ್-ಕಾಪಿ-ಪೇಸ್ಟ್ 
ಮಾಡಿದ ಥೀಸಿಸ್ಸೋ  
ಅಥವಾ ರಿಪೋರ್ಟೋ ಅಲ್ಲ.

ಅನುಭವ-ವಾಸ್ತವಗಳ ಹೂರಣದುಂಬಿ,
ಕನಸು-ಕಲ್ಪನೆಗಳ ಕಣಕಕ್ಕೆ.  
ಪ್ರೀತಿ-ಸ್ನೇಹದಿ ಲಟ್ಟಿಸಿ
ಒಲವಿನ ಒರತೆಯಲಿ 
ಹದವಾಗಿ ಬೇಯಿಸಿದ ಹೋಳಿಗೆಯದು! 





Thursday, April 28, 2011

ತಂತಿ ಹರಿದ ವೀಣೆ

ಅವಳು ವೀಣಾ
ನಾನೇ ವೈಣಿಕ

ಅವಳ ಧ್ವನಿ
ತಂತಿ ಹರಿದ ವೀಣೆ..!