ನನ್ನ ನಿರೀಕ್ಷೆಯಲ್ಲಿ

Thursday, September 7, 2017

ಇಷ್ಟ




ಸಂಗಾತ


ಚಿತ್ರ: puuung

ಹೃಸ್ವಕತೆ

ಬದುಕುವುದಕ್ಕೊಂದು ಕಾರಣ

ಒಮ್ಮೊಮ್ಮೆ...
ಕೆಲವು ಕಾರಣಗಳಿಂದ
ಈ ಬದುಕು ಯಾಕೆ?
ಅಂತನಿಸಿಬಿಡುತ್ತೆ. ಆದರೆ
ಹಲವು ಕಾರಣಗಳಿವೆಯೆಂದು
ಬದುಕಿದ್ದೇನೆ. ಆ ಹಲವು
ಕಾರಣಗಳಲ್ಲಿ, ನೀನು 
ಪ್ರಮುಖ ಕಾರಣ!

ಶ್ರೀಗಂಧ

ನೋವಾಗಿದೆ, ಪರವಾಗಿಲ್ಲ!
ನನ್ನದೆಯಲ್ಲಿ 
ಶ್ರೀಗಂಧದ 
ಕೊರಡನ್ನು ತೇಯ್ದ 
ಪರಿಮಳವಿದೆ.

ಹಾಸಿಗೆಯಿದ್ದಷ್ಟೇ ಕಾಲುಚಾಚಬೇಕೇ?