AbhiVyakthi
ನಾನೇನೂ ಬುದ್ಧನಲ್ಲದಿದ್ದರೂ, ನನ್ನೆದೆಯ ದನಿಗೆ ಬದ್ಧ
ನನ್ನ ನಿರೀಕ್ಷೆಯಲ್ಲಿ
Wednesday, May 23, 2018
ಕಂಬನಿ
ಕಣ್ಣಹನಿ ಜಾರಿಸದೆ
ಹಾಗೇ ಹಿಂಗುವಂತೆ
ತುಟಿ ಕಚ್ಚಿ
ಆಕಾಶ ನೋಡಿದನು
.
.
.
ಕಾದಿತ್ತು ಮೋಡವೂ
ಹನಿಯುದುರಿಸಲು!
Thursday, March 29, 2018
ಸಂಬಂಧ
ಆಕಳಿಸುವಾಗ, ಬಿಕ್ಕಳಿಸುವಾಗ;
ಯಾವುದೋ ಒಂದು
ಹೊಕ್ಕುಳ~ಬಳ್ಳಿ ಸಂಬಂಧ-
ನೆನಪಾಗುವುದು, ನೆಪವಾಗುವುದು!
© ಅಭಿಷೇಕ್ ರಾಯಸಂದ್ರ
Thursday, September 7, 2017
ಅಸೂಯೆ
ಬದ್ಧ
ನಾನೇನೂ ಬುದ್ಧನಲ್ಲದಿದ್ದರೂ
ನನ್ನೆದೆಯ ದನಿಗೆ ಬದ್ಧ!
Main buddh nahi hu par
apne dhadkan ke aawaz ko pratibaddh hu
ಅವಳಿಗೆ ಚಿಕ್ಕಂದಿನಿಂದ ಆಟಾಡೋಕೆ
ಅವರಪ್ಪ ಡಾಲ್, ಟೆಡ್ಡಿ ಏನನ್ನೂ ಕೊಡ್ಸಿಲ್ಲವಂತೆ,
ಅದಕ್ಕೆ ಈಗ ನಾನು ಬೇಕಂತೆ!
ಬೇಲಿ
ಬೇಲಿಯಾರಿ ಮೇಯುವಾಸೆ
ಬೇಲಿಯೇ ಇಲ್ಲದಿರುವಾಗ...
ಕಟ್ಟುಪಾಡುಗಳ
ಬೇಲಿಯ ಕಿತ್ತೆಸೆದಿಹೆ,
ಸುತ್ತಲೂ ಬಟಾಬಯಲು.
ಗುರು ಅಲ್ಲಮನೇನಾದರೂ
ಬರಬಹುದೆಂದು
ಕಾಯುತಿರುವೆ!
ಈ ಬಯಲದಾರಿಯಲಿ
ಇಷ್ಟ
ಸಂಗಾತ
ಚಿತ್ರ: puuung
ಹೃಸ್ವಕತೆ
ಬದುಕುವುದಕ್ಕೊಂದು ಕಾರಣ
ಒಮ್ಮೊಮ್ಮೆ...
ಕೆಲವು ಕಾರಣಗಳಿಂದ
ಈ ಬದುಕು ಯಾಕೆ?
ಅಂತನಿಸಿಬಿಡುತ್ತೆ. ಆದರೆ
ಹಲವು ಕಾರಣಗಳಿವೆಯೆಂದು
ಬದುಕಿದ್ದೇನೆ. ಆ ಹಲವು
ಕಾರಣಗಳಲ್ಲಿ, ನೀನು
ಪ್ರಮುಖ ಕಾರಣ!
ಶ್ರೀಗಂಧ
ನೋವಾಗಿದೆ, ಪರವಾಗಿಲ್ಲ!
ನನ್ನದೆಯಲ್ಲಿ
ಶ್ರೀಗಂಧದ
ಕೊರಡನ್ನು ತೇಯ್ದ
ಪರಿಮಳವಿದೆ.
ಹಾಸಿಗೆಯಿದ್ದಷ್ಟೇ ಕಾಲುಚಾಚಬೇಕೇ?
ಸುಂದರ ತಪ್ಪು
ಹುಡುಗಿಯರ ಸುಂದರ ಅಕ್ಷರಗಳಲ್ಲಿ
ತಪ್ಪು ಉತ್ತರ ಹುಡುಕೋದು ಕಷ್ಟ
ಕಂಗಳ ಪಿಸುಮಾತು
ಕಣ್ಣ ಪಿಸರು
ಪಿಸುಗುಟ್ಟಿದೆ
ಕಂಗಳ ತುಂಬಾ
ನಿನ್ನ ಕನಸೇ ತುಂಬಿವೇ
ನನಗಿಲ್ಲಿ ಜಾಗವಿಲ್ಲವೆಂದು!
ಎದೆಯಲೊಂದು ಸದ್ದು
ನಿನ್ನ ಕಿವಿಯ
ಜುಮಕಿಗಳ ಕಂಡಾಗ
ನನ್ನೆದೆಯಲ್ಲಿ
ಗಂಟೆ ಸದ್ದು
ಅಭಿಯಂತರೆ
ನೀ ನನ್ನ
ಕನಸುಗಳ
ಅಭಿಯಂತರೆ*
ನಾ ಬಳಿ ಬಂದರೆ
ನೀನಾಗುವೆ
ಅಭ್ಯಂತರೆ.
ಬಯಸುವೆ
ನೀನಾಗಲಿಯೆಂದು
ನನ್ನ ಬದುಕಿಗೆ
ಅಭಯಂತರೆ!
*ಅಭಿಯಂತರ-Engineer
ಶೀತಲ ಸಮರ
ಯಾಕೆ ಮೌನಿಯಾಗಿರುವೆ?
ಒಳಗೆ ಯುದ್ಧ ನಡೆಯುತ್ತಿದೆ.
ನಿನ್ನೊಡನಾಡಿದ ಮಾತುಗಳು
ನಿನ್ನೊಡನಾಡಿದ ಮಾತುಗಳು:
ಅರ್ಧ ಹಾಡಿ ನಿಲ್ಲಿಸಿದ
ಮಧುರ ಗೀತೆ.
ಆಡಿದುದಕೆ ಮನ ಕುಣಿದು
ಕುಪ್ಪಳಿಸುವುದು,
ಹಾಗೆಯೇ ಉಳಿದ ಮಾತುಗಳಿಗೆ
ಕಾತರಿಸುವುದು!
Wednesday, March 2, 2016
ಬಾಳಯಾನ
ದಡಸೇರಲಾಗದ
ಮಹಾಸಾಗರದ
ದೊಡ್ಡಹಡಗಾಗುವುದಕ್ಕಿಂತ
ಸಣ್ಣದೋಣಿಯಾಗಿ
ನಿನ್ನೊಡನೆ ದಡ
ಸೇರುವಾಸೆ!
Newer Posts
Older Posts
Home
Subscribe to:
Posts (Atom)