ನಿನ್ನ ಒಂದು
ಮುಗುಳು ನಗೆ
ಎನಗೆ ಮುಳುವಾಗಿದೆ
ನಾನೇನೂ ಕರೆದಿರಲ್ಲಿಲ್ಲ
ನೀನಾಗೇ ಬಂದೆ,
ಕಣ್ಣಲ್ಲೇ ಮಾತನಾಡಿದೆ
ಮುಗುಳ್ನಗುತ್ತಾ
ನಾ ಹರಿಯದಾದೆ
ನಿನ್ನ ಕಣ್ಣ-ಭಾಷೆಯ,
ಓದಲಾರದ ಹಳೆಯ
ಶಾಸನದಂತೆ
ಈಗ ನೀನಾಗೇ
ಹೋಗುತ್ತಿರುವೆ
ಕೋಪಿಸಿಕೊಂಡು, ನಾ
ಕೇಳುವುದಿಲ್ಲ ಯಾಕೆಂದು
ಆದರೆ, ನಿನ್ನ
ಒಂದು ಮುಗುಳು
ನಗೆ ಎನಗೀಗ
ಮುಳುವಾಗಿದೆ!
